Varsha shraddha tithi in bangalore bengaluru
ಆತ್ಮೀಯ ವಿಪ್ರ ಬಂಧುಗಳೇ,
ಕುಮಾರಸ್ವಾಮಿ ಲೇಔಟ್ ಬ್ರಾಹ್ಮಣ ಸೇವಾ ಸಂಘದಲ್ಲಿ ಬಹಳ ವರ್ಷಗಳಿಂದ ವಾರ್ಷಿಕ ಶ್ರಾದ್ಧ ಮಾಡಲು ಅನುಕೂಲ ಕಲ್ಪಿಸಲಾಗಿದೆ. ದಿನಕ್ಕೆ ಒಂದೇ ಶ್ರಾದ್ಧ, ರುಚಿ-ಶುಚಿಯಾದ ಅಡುಗೆ ಹಾಗೂ ಆರೋಗ್ಯಕರ ಶುಚಿತ್ವ ಕಾಪಾಡಿಕೊಂಡು ಬರುತ್ತಿದ್ದೇವೆ.
ಬಹುಶಃ ಬೆಂಗಳೂರಿನ ಯಾವುದೇ ಸ್ಥಳಕ್ಕಿಂತ ಕಡಿಮೆ ಖರ್ಚಿನಲ್ಲಿ ಶ್ರಾದ್ಧ ಮಾಡಲು ವ್ಯವಸ್ಥೆ ಮಾಡಿದೆ. ಕೇವಲ 4,500/ ರೂಪಾಯಿಗಳಿಗೆ ಹತ್ತು ಜನರ ಊಟ, ಪುರೋಹಿತರು ಮತ್ತು ಬ್ರಾಹ್ಮಣರ ಸಂಭಾವನೆ ಎಲ್ಲಾ ಸೇರಿ ಶ್ರಾದ್ಧ ಮಾಡಬಹುದು.
ಮಾತಾ-ಪಿತೃಗಳ ಶ್ರಾದ್ಧ ಮಾಡಲು ಆರ್ಥಿಕವಾಗಿ ತೋಂದರೆಯಲ್ಲಿರುವ ಬ್ರಾಹ್ಮಣರಿಗೆ ಸ್ಥಳವನ್ನು ಉಚಿತವಾಗಿ ಕೊಡಲಾಗುವುದು. ಅಲ್ಲದೆ ಊಟದ ವ್ಯವಸ್ಥೆಯನ್ನೂ ಅತಿ ಕಡಿಮೆ ಖರ್ಚಿನಲ್ಲಿ ಮಾಡಲು ಅನುಕೂಲ ಮಾಡಲಾಗುವುದು.
ಹೆಚ್ಚಿನ ಮಾಹಿತಿಗೆ ನಂ. 8277123884 ಅನ್ನು ಸಂಪರ್ಕಿಸಿ. Click on “Contact Us” for general enquiry